ಸಹಜ ಯೋಗ ಧ್ಯಾನ ಆಧ್ಯಾತ್ಮಿಕ ಇತಿಹಾಸದಲ್ಲಿ ಅನನ್ಯ ಆವಿಷ್ಕಾರವಾಗಿದೆ. ನಮ್ಮಲಿ ಸಂಗ್ರಹಿಸಿರುವ ಆಂತರಿಕ ಶಕ್ತಿಯ ಜಾಗೃತಿಯಿಂದ ಸಹಜವಾಗಿ ಪರಿವರ್ತನೆಯನ್ನು ಮಾನವರಲ್ಲಿ ಕಾಣಬಹುದು.ಶ್ರೀ ಮಾತಾಜಿ ನಿರ್ಮಲಾ ದೇವಿಯವರು ಈ ಅತ್ಯದ್ಭುತ ಧ್ಯಾನ ಪ್ರಕ್ರಿಯೆಯನ್ನು ಕಂಡುಹಿಡಿದರು, ಸುಮಾರು 120 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಇಂದು ಸಹಜ ಯೋಗ ಧ್ಯಾನವನ್ನು ಅಭ್ಯಾಸ ಮಾಡಲಾಗುತ್ತಿದೆ .ಏಲ್ಲಾ ವರ್ಗದ ಮನುಷ್ಯರಲ್ಲಿ ಹಿತವಾದ ಬೆಳವಣಿಗೆ ಕಂಡು ಬರುತ್ತಿದೆ.ಬನ್ನಿ ನಮ್ಮ ಉಚಿತ ಆನ್ಲೈನ್ ಅವಧಿಗಳ ಮುಖಾಂತರ ಜಾಗೃತಿಯ ಪ್ರಯಾಣದಲ್ಲಿ ಭಾಗಿಯಾಗಿ.
ಧ್ಯಾನದಿಂದ ಆನಂದ ಸ್ಥಿತಿಯನ್ನು ಕಾಣಲು ಎದುರು ನೋಡುತ್ತಿರುವ ಎಲ್ಲಾ ವರ್ಗದ ಜನರಿಗೆ ನಾವು ಉಚಿತ ಆನ್ಲೈನ್ ಧ್ಯಾನ ತರಗತಿಗಳನ್ನು ನಡೆಸುತ್ತೇವೆ. ಶೈಕ್ಷಣಿಕ ಸಂಸ್ಥೆ ಹಾಗು ಕಾರ್ಪೊರೇಟ್ ಗಳಿಗೆ ಉಚಿತ ಧ್ಯಾನ ಕಾರ್ಯಾಗಾರಗಳನ್ನು (ವರ್ಕ್ ಶಾಪ್) ನಡೆಸುತ್ತೇವೆ.ನೀವು ಧ್ಯಾನದಿಂದ ಒತ್ತಡ,ಆತಂಕದಿಂದ ಹೊರಬಂದು ಸಮತೋಲನ ಜೀವನವನ್ನು ನಡೆಸಲು ಎದುರು ನೋಡುತ್ತಿದ್ದರೆ ಅಥವ ನಿಮ್ಮ ಸಂಸ್ಥೆಯಲ್ಲಿ ನಿಮ್ಮ ತಂಡದವರಿಗೆ ಧ್ಯಾನದ ಅವಧಿಯನ್ನು ಆಯೋಜಿಸಲು ಎದುರು ನೋಡುತ್ತಿದ್ದರೆ ದಯವಿಟ್ಟು ಸಂಕೋಚವಿಲ್ಲದೆ ನಮ್ಮ ಕೆಳಕಂಡ ಸಂಯೋಜಕರಿಗೆ ತಲುಪಿ. ನೀವು ನೊಂದಣಿ(ರಿಜಿಸ್ಟರ್) ಆಗುವ ಮುಖಾಂತರ ನಮ್ಮ ಮುಂದಿನ ನವೀಕರಣಗಳು ಹಾಗು ಕಾರ್ಯಕ್ರಮಗಳ ಬಗ್ಗೆ ತಿಳಿಯಬಹುದು.
ಒತ್ತಡ ಹಾಗು ಆತಂಕದಿಂದ ನಿವಾರಣೆ
ಆನಂದ ಹಾಗು ಸ್ವಯಂ ಪ್ರೇರಿತ ವ್ಯಕ್ತಿತ್ವದ ರಚನೆ
ರೋಗ ನಿರೋಧಕ ಶಕ್ತಿಯಲ್ಲಿ ಸುಧಾರಿಸುವಿಕೆ
ದೈಹಿಕ, ಮಾನಸಿಕ ಹಾಗು ಭಾವನಾತ್ಮಕ ಸಮತೋಲನ ಸ್ಥಿತಿಯನ್ನು ತಲುಪಲು ಸಾಧ್ಯ
ನಿಮ್ಮನ್ನು ಸೃಷ್ಟಿಸಿರುವ ಶಕ್ತಿಯೊಂದಿಗೆ ಒಂದಾಗುವಿರಿ ಹಾಗು ಉನ್ನತ ಆಂತರಿಕ ಶಕ್ತಿಯ ಜಾಗೃತಿಯ ಅನುಭವ
ಉತ್ತಮ ಮಾನವನಾಗಿ ಪರಿವರ್ತನೆ
ಇದು ಸಹಜ ಯೋಗ ಧ್ಯಾನದ ಪರಿಚಯದ ಅಧಿವೇಶನವಾಗಿದೆ, ಇದನ್ನು ಸರಳ ಮತ್ತು ಆಳವಾಗಿ ಪರಿವರ್ತಿಸುವ ಧ್ಯಾನ ತಂತ್ರವಾಗಿದೆ, ಇದನ್ನು 120 ಕ್ಕೂ ಹೆಚ್ಚು ದೇಶಗಳಲ್ಲಿ ಮಕ್ಕಳು ಮತ್ತು ವಯಸ್ಕರು ಅಭ್ಯಾಸ ಮಾಡುತ್ತಿದ್ದಾರೆ
ಗ್ಲೋಬಲ್ ರೆಕಾರ್ಡ್ಸ್ ಅಂಡ್ ರಿಸರ್ಚ್ ಫೌಂಡೇಷನ್ ದಾಖಲಾತಿ ಪ್ರಮಾಣಪತ್ರದಂತೆ ಸುಮಾರು 1.2 ದಶಲಕ್ಷ ಸಹಜ ಯೋಗ ಧ್ಯಾನ ಅಭ್ಯಸಿಸುತ್ತಿರುವವರು ಆನ್ಲೈನ್ ಧ್ಯಾನ ಕಾರ್ಯಕ್ರಮದಲ್ಲಿ ಲಾಕ್ಡೌನ್ ಸಮಯದಲ್ಲಿ ಮೇ ತಿಂಗಳಿನಲ್ಲಿ ಭಾಗಿಯಾಗಿದ್ದರು
ಇದು ಸಹಜ ಯೋಗ ಧ್ಯಾನದ ಪರಿಚಯದ ಅಧಿವೇಶನವಾಗಿದೆ.
ಇದು ಸಹಜ ಯೋಗ ಧ್ಯಾನದ ಪರಿಚಯದ ಅಧಿವೇಶನವಾಗಿದೆ.
ಧ್ಯಾನದಲ್ಲಿ ಆಸಕ್ತಿವುಳ್ಳವರಿಗೆ ಹಾಗು ಆಧ್ಯಾತ್ಮಿಕ ಬೆಳವಣಿಗೆಗಾಗಿ ಎದುರು ನೋಡುತ್ತಿರುವ ಸಾಧಕರಿಗಾಗಿ ನಾವು ನಮ್ಮ ವೆಬ್ ಸೈಟ್ ರಚನೆ ಮಾಡಿದ್ದೇವೆ. ಸಹಜ ಯೋಗ ಧ್ಯಾನದ ಬಗ್ಗೆ ಹೆಚ್ಚು ತಿಳಿಯಲು ನಮ್ಮ ಮುಖ್ಯ ವೆಬ್ ಸೈಟ್ ಗೆ ಭೇಟಿ ನೀಡಿ. ಸಹಜ ಯೋಗ ಧ್ಯಾನವನ್ನು ಅಭ್ಯಾಸ ಮಾಡುತ್ತಿರುವವರಿಂದ ತಮ್ಮ ಜೀವನದಲ್ಲಿ ನಡೆದಿರುವ ಬದಲಾವಣೆಯ ಅನುಭವದ ಮಾತುಗಳನ್ನು ತಿಳಿಯಿರಿ. ನಮ್ಮ ಬ್ಲಾಗ್ ಮುಖಾಂತರ ಇನ್ನಷ್ಟು ಮಾಹಿತಿಯನ್ನು ತಿಳಿಯಲು ತಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಸರಳವಾದ 10 ನಿಮಿಷಗಳ ಧ್ಯಾನವು ಮಕ್ಕಳಿಗೆ ಬುದ್ಧಿವಂತಿಕೆ, ಆತ್ಮವಿಶ್ವಾಸ, ಸೃಜನಶೀಲ, ಕ್ರಿಯಾತ್ಮಕವಾಗಲು ಮತ್ತು ಜೀವನದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಇನ್ನೂ ಅನೇಕ ಸಕಾರಾತ್ಮಕ ಗುಣಗಳನ್ನು ಬೆಳೆಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಿರಿ!
ಅಂತಿಮವಾಗಿ ಹಾಗು ಬಹುಮುಖ್ಯವಾಗಿ ಸಹಜ ಯೋಗ ಧ್ಯಾನದಿಂದ ಆತ್ಮಸಾಕ್ಷಾತ್ಕಾರವನ್ನು ಪ.ಪೂ. ಶ್ರೀ ಮಾತಜಿ ನಿರ್ಮಲಾ ದೇವಿ ಯವರ ಅಮೃತ ವಾಣಿಯಿಂದ ವೀಡಿಯೊ ಮುಖಾಂತರ ಅನುಭವವನ್ನು ಪಡೆಯಿರಿ.
Copyright © 2023 Sahaja Yoga Karnataka - All Rights Reserved.