Sahaja Yoga Karnataka
Home
ಮನೆ
  • Home
  • ಮನೆ
Sahaja Yoga Karnataka
Home
ಮನೆ
More
  • Home
  • ಮನೆ

  • Home
  • ಮನೆ
image8

ಆಂತರಿಕ ಶಾಂತಿಯನ್ನು ಅನುಭವಿಸಿ!

ನಮ್ಮ ಉಚಿತ ಆನ್ಲೈನ್ ತರಗತಿಗಳಲ್ಲಿ ಭಾಗಿಯಾಗಿ!

ಈಗಲೆ ನೊಂದಾಯಿಸಿ

ನಮ್ಮ ಪರಿಚಯ

ಎಲ್ಲರಿಗಾಗಿ ಧ್ಯಾನ!

  

ಸಹಜ ಯೋಗ ಧ್ಯಾನ ಆಧ್ಯಾತ್ಮಿಕ ಇತಿಹಾಸದಲ್ಲಿ ಅನನ್ಯ ಆವಿಷ್ಕಾರವಾಗಿದೆ. ನಮ್ಮಲಿ ಸಂಗ್ರಹಿಸಿರುವ ಆಂತರಿಕ ಶಕ್ತಿಯ ಜಾಗೃತಿಯಿಂದ ಸಹಜವಾಗಿ ಪರಿವರ್ತನೆಯನ್ನು ಮಾನವರಲ್ಲಿ ಕಾಣಬಹುದು.ಶ್ರೀ ಮಾತಾಜಿ ನಿರ್ಮಲಾ ದೇವಿಯವರು ಈ ಅತ್ಯದ್ಭುತ ಧ್ಯಾನ ಪ್ರಕ್ರಿಯೆಯನ್ನು ಕಂಡುಹಿಡಿದರು, ಸುಮಾರು 120 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಇಂದು ಸಹಜ ಯೋಗ ಧ್ಯಾನವನ್ನು ಅಭ್ಯಾಸ ಮಾಡಲಾಗುತ್ತಿದೆ .ಏಲ್ಲಾ ವರ್ಗದ ಮನುಷ್ಯರಲ್ಲಿ ಹಿತವಾದ ಬೆಳವಣಿಗೆ ಕಂಡು ಬರುತ್ತಿದೆ.ಬನ್ನಿ ನಮ್ಮ ಉಚಿತ ಆನ್ಲೈನ್ ಅವಧಿಗಳ ಮುಖಾಂತರ ಜಾಗೃತಿಯ ಪ್ರಯಾಣದಲ್ಲಿ ಭಾಗಿಯಾಗಿ.


ಧ್ಯಾನದಿಂದ ಆನಂದ ಸ್ಥಿತಿಯನ್ನು ಕಾಣಲು ಎದುರು ನೋಡುತ್ತಿರುವ ಎಲ್ಲಾ ವರ್ಗದ ಜನರಿಗೆ ನಾವು ಉಚಿತ ಆನ್ಲೈನ್ ಧ್ಯಾನ ತರಗತಿಗಳನ್ನು ನಡೆಸುತ್ತೇವೆ. ಶೈಕ್ಷಣಿಕ ಸಂಸ್ಥೆ ಹಾಗು ಕಾರ್ಪೊರೇಟ್ ಗಳಿಗೆ ಉಚಿತ ಧ್ಯಾನ ಕಾರ್ಯಾಗಾರಗಳನ್ನು (ವರ್ಕ್ ಶಾಪ್) ನಡೆಸುತ್ತೇವೆ.ನೀವು ಧ್ಯಾನದಿಂದ ಒತ್ತಡ,ಆತಂಕದಿಂದ ಹೊರಬಂದು ಸಮತೋಲನ ಜೀವನವನ್ನು ನಡೆಸಲು ಎದುರು ನೋಡುತ್ತಿದ್ದರೆ ಅಥವ ನಿಮ್ಮ ಸಂಸ್ಥೆಯಲ್ಲಿ ನಿಮ್ಮ ತಂಡದವರಿಗೆ ಧ್ಯಾನದ ಅವಧಿಯನ್ನು ಆಯೋಜಿಸಲು ಎದುರು ನೋಡುತ್ತಿದ್ದರೆ ದಯವಿಟ್ಟು ಸಂಕೋಚವಿಲ್ಲದೆ ನಮ್ಮ ಕೆಳಕಂಡ ಸಂಯೋಜಕರಿಗೆ ತಲುಪಿ. ನೀವು ನೊಂದಣಿ(ರಿಜಿಸ್ಟರ್) ಆಗುವ ಮುಖಾಂತರ ನಮ್ಮ ಮುಂದಿನ ನವೀಕರಣಗಳು ಹಾಗು ಕಾರ್ಯಕ್ರಮಗಳ ಬಗ್ಗೆ ತಿಳಿಯಬಹುದು.

ಧ್ಯಾನ ನಿಮಗೆ ಹೇಗೆ ಸಹಾಯ ಮಾಡುತ್ತದೆ?

image9

 ಒತ್ತಡ ಹಾಗು ಆತಂಕದಿಂದ ನಿವಾರಣೆ 

bliss by meditation

 ಆನಂದ ಹಾಗು ಸ್ವಯಂ ಪ್ರೇರಿತ ವ್ಯಕ್ತಿತ್ವದ ರಚನೆ 

holistic life, balance, meditation, mindfulness

 ರೋಗ ನಿರೋಧಕ ಶಕ್ತಿಯಲ್ಲಿ ಸುಧಾರಿಸುವಿಕೆ 

joy, relax, stress relief

 ದೈಹಿಕ, ಮಾನಸಿಕ ಹಾಗು ಭಾವನಾತ್ಮಕ ಸಮತೋಲನ ಸ್ಥಿತಿಯನ್ನು ತಲುಪಲು ಸಾಧ್ಯ 

image10

ನಿಮ್ಮನ್ನು ಸೃಷ್ಟಿಸಿರುವ ಶಕ್ತಿಯೊಂದಿಗೆ ಒಂದಾಗುವಿರಿ ಹಾಗು ಉನ್ನತ ಆಂತರಿಕ ಶಕ್ತಿಯ ಜಾಗೃತಿಯ ಅನುಭವ 

image11

 ಉತ್ತಮ ಮಾನವನಾಗಿ ಪರಿವರ್ತನೆ 

ಕಾರ್ಯಕ್ರಮಗಳು

image12
Join Now

ಪ್ರತ್ಯೇಕ ಕಾರ್ಯಕ್ರಮಗಳು

image13

ಕನ್ನಡದಲ್ಲಿ ಸಹಜ ಯೋಗ ಧ್ಯಾನದ ಮುಂದಿನ ಅನುಸರಣಾ ಕಾರ್ಯಕ್ರಮಗಳು

 ಧ್ಯಾನದ ಸದಾ ಆನಂದದಾಯಕ ಸ್ಥಿತಿಯಲ್ಲಿ ಮುಂದುವರಿಯಲು ಮತ್ತು ನಿಮ್ಮನ್ನು ಆ  ಸ್ಥಿತಿಯಲ್ಲಿ ಸ್ಥಾಪಿಸಲು ನಿಮಗೆ ಸಹಾಯ ಮಾಡಲು ನಾವು ಕನ್ನಡದಲ್ಲಿ ಪ್ರತ್ಯೇಕವಾಗಿ ಸಹಜಯೋಗ ಧ್ಯಾನದ ಬಗ್ಗೆ ಹೆಚ್ಚಿನ ಅವಧಿಗಳನ್ನು ನಡೆಸುತ್ತೇವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ.

ಪ್ರತಿ ಅಧಿವೇಶನವು ಹೊಸ ಮಾಹಿತಿಯನ್ನು ಒಳಗೊಂಡಿದೆ ಮತ್ತು ಖಂಡಿತವಾಗಿಯೂ ನೀವು ಅನುಭವದ ವ್ಯತ್ಯಾಸವನ್ನು ಅನುಭವಿಸಬಹುದು. 

image14

ಕನ್ನಡದಲ್ಲಿ ಸಹಜ ಯೋಗ ಧ್ಯಾನ ಕಾರ್ಯಕ್ರಮದ ಪರಿಚಯ

 ನಾವು ಸಹಜ ಯೋಗ ಧ್ಯಾನದ ಪರಿಚಯ ಕಾರ್ಯಕ್ರಮವನ್ನು ಕನ್ನಡದಲ್ಲಿ ಆಯೋಜಿಸಲು ಉತ್ಸುಕರಾಗಿದ್ದೇವೆ. ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರು,ಬಂಧು ಬಳಗದವರೊಂದಿಗೆ ಹಂಚಿಕೊಳ್ಳಿ 

Global records on meditation

ದಾಖಲಾತಿ: ಅತಿದೊಡ್ಡ ಆನ್ಲೈನ್ ಧ್ಯಾನ ಅವಧಿಗಳು

 ಗ್ಲೋಬಲ್ ರೆಕಾರ್ಡ್ಸ್ ಅಂಡ್ ರಿಸರ್ಚ್ ಫೌಂಡೇಷನ್ ದಾಖಲಾತಿ ಪ್ರಮಾಣಪತ್ರದಂತೆ ಸುಮಾರು 1.2 ದಶಲಕ್ಷ ಸಹಜ ಯೋಗ ಧ್ಯಾನ ಅಭ್ಯಸಿಸುತ್ತಿರುವವರು ಆನ್ಲೈನ್ ಧ್ಯಾನ ಕಾರ್ಯಕ್ರಮದಲ್ಲಿ ಲಾಕ್ಡೌನ್ ಸಮಯದಲ್ಲಿ ಮೇ ತಿಂಗಳಿನಲ್ಲಿ ಭಾಗಿಯಾಗಿದ್ದರು 

ನಮ್ಮನ್ನು ಸಂಪರ್ಕಿಸಿ

Send Message

ನಮ್ಮೊಂದಿಗೆ ಸಂಪರ್ಕದಲ್ಲಿರಿ!

ನಮ್ಮ ಮುಂದಿನ ಆನ್ಲೈನ್ ಧ್ಯಾನ ತರಗತಿಗಳ ಕುರಿತು ಹೆಚ್ಚು ತಿಳಿಯಲು ಆಸಕ್ತಿ ಇದಿಯೇ?

ನಿಮ್ಮ ಶೈಕ್ಷಣಿಕ ಸಂಸ್ಥೆ,ಸಮಾಜ, ಕಾರ್ಪೊರೇಟ್ ಗಳಿಗೆ ಕರ್ಯಾಗಾರಗಳನ್ನು(ವರ್ಕ್ ಶಾಪ್) ನಡೆಸಬೇಕೆ?


ದಯವಿಟ್ಟು ಯಾವುದೇ ರೀತಿಯ ಪ್ರಶ್ನೆಗಳಿಗೆ ನಮ್ಮನ್ನು ತಲುಪಿ.

ವಾಟ್ಸ್ಯಾಪ್ ಮುಖಾಂತರ ಸಂದೇಶಿಸಿ

ಸಹಜ ಯೋಗ ಕರ್ನಾಟಕ

CA Site No 2, Adjacent to BSNL Exchange, Judicial Layout, Kanakapura Main, Road, Talaghattapura, Bengaluru, Karnataka 560062

ಸಹಜ ಯೋಗ ಧ್ಯಾನದ ಕುರಿತು ಹೆಚ್ಚು ತಿಳಿಯಬೇಕೆ?

  

ಧ್ಯಾನದಲ್ಲಿ ಆಸಕ್ತಿವುಳ್ಳವರಿಗೆ ಹಾಗು ಆಧ್ಯಾತ್ಮಿಕ ಬೆಳವಣಿಗೆಗಾಗಿ ಎದುರು ನೋಡುತ್ತಿರುವ ಸಾಧಕರಿಗಾಗಿ ನಾವು ನಮ್ಮ ವೆಬ್ ಸೈಟ್ ರಚನೆ ಮಾಡಿದ್ದೇವೆ. ಸಹಜ ಯೋಗ ಧ್ಯಾನದ ಬಗ್ಗೆ ಹೆಚ್ಚು ತಿಳಿಯಲು ನಮ್ಮ ಮುಖ್ಯ ವೆಬ್ ಸೈಟ್ ಗೆ ಭೇಟಿ ನೀಡಿ. ಸಹಜ ಯೋಗ ಧ್ಯಾನವನ್ನು ಅಭ್ಯಾಸ ಮಾಡುತ್ತಿರುವವರಿಂದ ತಮ್ಮ ಜೀವನದಲ್ಲಿ ನಡೆದಿರುವ ಬದಲಾವಣೆಯ ಅನುಭವದ ಮಾತುಗಳನ್ನು ತಿಳಿಯಿರಿ. ನಮ್ಮ ಬ್ಲಾಗ್ ಮುಖಾಂತರ ಇನ್ನಷ್ಟು ಮಾಹಿತಿಯನ್ನು ತಿಳಿಯಲು ತಮ್ಮನ್ನು ಪ್ರೋತ್ಸಾಹಿಸುತ್ತೇವೆ.


ಅಂತಿಮವಾಗಿ ಹಾಗು ಬಹುಮುಖ್ಯವಾಗಿ ಸಹಜ ಯೋಗ ಧ್ಯಾನದಿಂದ ಆತ್ಮಸಾಕ್ಷಾತ್ಕಾರವನ್ನು ಪ.ಪೂ. ಶ್ರೀ ಮಾತಜಿ ನಿರ್ಮಲಾ ದೇವಿ ಯವರ ಅಮೃತ ವಾಣಿಯಿಂದ ವೀಡಿಯೊ ಮುಖಾಂತರ ಅನುಭವವನ್ನು ಪಡೆಯಿರಿ.

ನಿಮ್ಮ ಪಯಣ ಆರಂಭವಾಗಲಿ!

Social

Copyright © 2020 Sahaja Yoga Karnataka - All Rights Reserved.